
19th February 2025
ಜಿಎಂ ನ್ಯೂಜ್ ಕುಷ್ಟಗಿ.
ಕುಷ್ಟಗಿ : ಪರಮಪೂಜ್ಯ ವಿರೇಂದ್ರಹೆಗಡೆ ಹಾಗೂ ಹೇಮಾವತಿ ಹೆಗಡೆಯವರು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಹಲವಾರು ಸಾಮಾಜಿಕ ಕಾರ್ಯಗಳನ್ನು ಮಾಡಿದ್ದಾರೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಶೇಖರನಾಯ್ಕ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕುಷ್ಟಗಿ ಶಾಖೆ ಹಾಗೂ ಡಾ.ಎಂ.ಎಂ ಜೋಷಿ ನೇತ್ರ ವಿಜ್ಞಾನ ಸಂಸ್ಥೆ ಹುಬ್ಬಳ್ಳಿ, ವಿನಾಯಕ ನೇತ್ರ ಸೇವಾ ಸಂಸ್ಥೆ ಕೊಪ್ಪಳ ಇವರುಗಳ ಸಂಯುಕ್ತಾಶ್ರಯದಲ್ಲಿ ಬುಧವಾರ ಬೆಳಿಗ್ಗೆ ಇಲ್ಲಿಯ ಶ್ರೀ ಬುತ್ತಿಬಸವೇಶ್ವರ ಸಭಾಭವನದಲ್ಲಿ ಏರ್ಪಡಿಸಿದ್ದ ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಕೆರೆ ಅಭಿವೃದ್ಧಿ, ಬಡಜನರಿಗೆ ವಾತ್ಸಲ ಯೋಜನೆಯಡಿಯಲ್ಲಿ ಉಚಿತವಾಗಿ ಮನೆ ನಿರ್ಮಾಣ, ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಸಹಾಯಧನ, ನಿರ್ಗತಿಕ ಹಿರಿಯ ನಾಗರಿಕರಿಗೆ ಮಾಶಾಸನ ಸೇರಿದಂತೆ ಅನೇಕ ಯೋಜನೆಗಳ ಮೂಲಕ ಬಡಜನರಿಗೆ ಸಹಾಯ ಮಾಡಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಸಾಲ ನೀಡುವ ಸಂಸ್ಥೆಯಲ್ಲ ವಿವಿಧ ಬ್ಯಾಂಕ್ ಗಳ ಸಹಭಾಗಿತ್ವದಲ್ಲಿ ಸದಸ್ಯರ ಉಳಿತಾಯ ಖಾತೆ ತೆರೆದು ಸಾಲ ಸೌಲಭ್ಯ ಒದಗಿಸಿ ಉದ್ಯಮಗಳ ಮೂಲಕ ಮಹಿಳೆಯರು ಸ್ವಾವಲಂಬಿ ಜೀವನ ನಡೆಸಲು ಗ್ರಾಮಾಭಿವೃದ್ಧಿ ಯೋಜನೆಯನ್ನು ಆರಂಭಿಸಿದ್ದಾರೆ ಎಂದು ಹೇಳಿದರು.
ಮಹಿಳಾ ಸ್ವ ಸಹಾಯ ಸಂಘದ ಸದಸ್ಯರು ಆರೋಗ್ಯ ಕಾರ್ಡ್ ಪಡೆಯುವ ಮೂಲಕ ಉತ್ತಮ ಆರೋಗ್ಯ ಹೊಂದಬೇಕು ಎಂದು ಸಲಹೆ ನೀಡಿದರು.
ವಿನಾಯಕ ನೇತ್ರ ಸೇವಾ ಸಂಸ್ಥೆ ಅಧ್ಯಕ್ಷ ಬಸವರಾಜ ಪಲ್ಲೇದ, ವಕೀಲ ಚಂದ್ರಶೇಖರ ಉಪ್ಪಿನ ಮಾತನಾಡಿದರು.
ಈ ಸಂದರ್ಭದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ಪ್ರಕಾಶರಾವ್, ಒಕ್ಕೂಟದ ಅಧ್ಯಕ್ಷರಾದ ಹಂಪಮ್ಮ ಕೋಳೂರು, ಶಿಲ್ಪಾ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮನ್ವಯಾಧಿಕಾರಿ ಶಿವಲೀಲಾ ಬೆಳ್ಳೇರಿಮಠ ಹಾಗೂ ಕಾರ್ಯದರ್ಶಿ ಪ್ರಭು ಜಾಗೀರದಾರ, ನೇತ್ರಾಧಿಕಾರಿ ಮನೋಹರ ಪತ್ತಾರ, ಕಾವೇರಿ, ಬಸಯ್ಯ ಹಿರೇಮಠ, ವಲಯದ ಮೇಲ್ವಿಚಾರಕಿ ಮಂಜುಳಾ, ಟಿ.ಎನ್.ಓ ರಾಘವೇಂದ್ರ, ಸೇವಾ ಪ್ರತಿನಿಧಿಗಳಾದ ಕಳಕಮ್ಮ, ಶಿವಶರಣಮ್ಮ, ಒಕ್ಕೂಟದ ಪದಾಧಿಕಾರಿಗಳು ಹಾಗೂ ಜ್ಞಾನ ವಿಕಾಸ ಹಾಗೂ ಎಲ್ಲಾ ಸ್ವಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು.
ಶರಣಪ್ಪ ಲೈನದ್ ಸ್ವಾಗತಿಸಿದರು.
ಶಿವಲೀಲಾ ಬೆಳ್ಳೇರಿಮಠ ವಂದಿಸಿದರು.
ಶಿಬಿರದಲ್ಲಿ ಸುಮಾರು 112 ಜನರು ತಮ್ಮ ಕಣ್ಣುಗಳನ್ನು ತಪಾಸಣೆ ಮಾಡಿದರು.
20 ಜನರು ಕಣ್ಣಿನ ಪೊರೆ ಹೊಂದಿರುವ ಫಲಾನುಭವಿಗಳು ಶಸ್ತ್ರ ಚಿಕಿತ್ಸೆಗೆ ಆಯ್ಕೆಯಾದರು.
ವರದಿ : ಭೀಮಸೇನರಾವ್ ಕುಲಕರ್ಣಿ ಕುಷ್ಟಗಿ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕುಷ್ಟಗಿ ಶಾಖೆ ಹಾಗೂ ಡಾ.ಎಂ.ಎಂ ಜೋಷಿ ನೇತ್ರ ವಿಜ್ಞಾನ ಸಂಸ್ಥೆ ಹುಬ್ಬಳ್ಳಿ, ವಿನಾಯಕ ನೇತ್ರ ಸೇವಾ ಸಂಸ್ಥೆ ಕೊಪ್ಪಳ ಇವರುಗಳ ಸಂಯುಕ್ತಾಶ್ರಯದಲ್ಲಿ ಬುಧವಾರ ಬೆಳಿಗ್ಗೆ ಕುಷ್ಟಗಿ ನಗರದಲ್ಲಿ ಶ್ರೀ ಬುತ್ತಿ ಬಸವೇಶ್ವರ ಸಭಾಭವನದಲ್ಲಿ ಏರ್ಪಡಿಸಿದ್ದ ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸೆ ಶಿಬಿರದ ಕಾರ್ಯಕ್ರಮ ಜರುಗಿತು.
ಡಾ,ಬಿ,ಆರ್,ಅಂಬೇಡ್ಕರ ಪ್ರತಿಮೆಗೆ ಸ್ಥಳವಕಾಶಕ್ಕೆ ಸ್ಪಂಧಿಸಿದ ಸಚಿವ ಡಾ,ಮಾಹಾದೇವಪ್ಪವರಿಗೆ ಗೌರವ ಸನ್ಮಾನ!!
ಚಡಚಣ ಸಂಗಮೇಶ್ವರ ಜಾತ್ರೆಯ ಸಂಭ್ರಮ ಬಾನAಗಳದಲ್ಲಿ ಚಿತ್ತಾರ ಬಿಡಿಸಿದ ಪಟಾಕಿಗಳು